ಜಿಲ್ಲಾ ಕೋವಿಡ್-19 ವಿಶ್ವವ್ಯಾಧಿ ಪ್ರತಿಸ್ಪಂದನಾ ಯೋಜನೆ

UNSPECIFIED, ed. (2020) ಜಿಲ್ಲಾ ಕೋವಿಡ್-19 ವಿಶ್ವವ್ಯಾಧಿ ಪ್ರತಿಸ್ಪಂದನಾ ಯೋಜನೆ. Azim Premji University.

[img] Text
Download (508kB)

Abstract

ಕೋವಿಡ್-19 ಮಹಾರೋಗವು ಹರಡಿ ಎಲ್ಲ ದೇಶಗಳನ್ನೂ ಹಿಂದೆಂದೂ ಕಾಣದ ಮತ್ತು ಬೃಹತ್ತಾದ ಆರೋಗ್ಯ ಮತ್ತು ಮಾನವತಾ ಬಿಕ್ಕಟ್ಟಿಗೆ ತಳ್ಳಿದೆ. ಈ ಬಿಕ್ಕಟ್ಟು ಎಷ್ಟು ಕಾಲ ಮುಂದುವರೆಯಬಹುದು ಮತ್ತು ಆರ್ಥಿಕತೆ, ನಾಗರಿಕರ ಜೀವನೋಪಾಯ ಮತ್ತು ಯಾರಿಗೆ ತುಂಬಾ ಅಗತ್ಯವೋ ಅವರಿಗೆ ಪ್ರಾಥಮಿಕ ಆರೋಗ್ಯ ಸೌಲಭ್ಯ ಸಿಗುವಂತಾಗುವುದು ಇವುಗಳಿಗೆಲ್ಲಾ ಎಂಥ ಹೊಡೆತ ಉಂಟಾಗಬಹುದು ಎಂಬುದನ್ನು ಇಂದಿಗೂ ಖಚಿತವಾಗಿ ಹೇಳಲಾಗುತ್ತಿಲ್ಲ. ಭಾರತದಲ್ಲಿ ನಾವು, ವೈರಾಣು ವೇಗವಾಗಿ ಹರಡದಂತೆ ತಡೆಯಲು ಘೋಷಿಸಲಾಗಿರುವ 21 ದಿನಗಳ ಲಾಕ್‌ಡೌನ್‌ನಲ್ಲಿದ್ದೇವೆ. ಲಾಕ್‌ಡೌನ್‌ನ ಮೊದಲ ಕೆಲವು ದಿನಗಳಲ್ಲೇ ನಮ್ಮ ಸಹ-ನಾಗರಿಕರ ಅನೇಕ ಗುಂಪುಗಳು ಎಂತಹ ದುರ್ಬಲ ಪರಿಸ್ಥಿತಿಯಲ್ಲಿವೆ ಎಂಬುದು ನಿಚ್ಚಳವಾಗಿ ಗೋಚರವಾಗುತ್ತಿದೆ. ನಮಗಿಂತಲೂ ಉತ್ತಮವಾದ ಸುಸಜ್ಜಿತವಾದ ಆರೋಗ್ಯ ಸೇವಾ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳೇ ವೈರಾಣುವಿನ ಪ್ರಸಾರದ ವೇಗದಡಿಯಲ್ಲಿ ಕುಸಿದುಬಿದ್ದಿವೆ. ಜಾಗತಿಕವಾಗಿ ಸಮಾಜೋ-ಆರ್ಥಿಕ ಸವಾಲುಗಳು ಹೊರಹೊಮ್ಮುತ್ತಿವೆ. ಈ ಬಿಕ್ಕಟ್ಟು ಮುಂದುವರೆಯುತ್ತಿದ್ದಂತೆ ಬಡವರು ಮತ್ತು ಅಂಚಿನಲ್ಲಿರುವ ಸಮುದಾಯಗಳು ಎಲ್ಲರಿಗಿಂತಲೂ ಹೆಚ್ಚಾಗಿ ತೊಂದರೆಗೊಳಗಾಗುತ್ತಾರೆ. ಮಾನವೀಯ ನೆರವು ಮತ್ತು ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ತಳಮಟ್ಟದಲ್ಲಿ ಬೆಂಬಲದ ಅವಶ್ಯಕತೆ ಇದೆ. ಸಂಬಂಧಪಟ್ಟ ಕ್ಷೇತ್ರಗಳ ತಜ್ಞರನ್ನು ಮತ್ತು ಕೆಲಸದಲ್ಲಿ ತೊಡಗಿರುವವರನ್ನು ಒಂದು ಕಡೆ ತಂದು ನಾಗರಿಕ ಸಮಾಜದ ಸಂಘಟನೆಗಳು ತಮ್ಮ ಕೆಲಸದ ಮೇಲೆ ಸೂಕ್ತವಾಗಿ ಕೇಂದ್ರೀಕರಿಸುವಂತೆ ಮಾಡಲು, ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚು ಮಾಡಲು ಮತ್ತು ಸಮಾಜದ ಯಾವ ವಿಭಾಗಗಳಿಗೆ ಅವಶ್ಯಕತೆ ಅತಿ ಹೆಚ್ಚಾಗಿ ಇದೆಯೋ ಅವರಿಗೆ ಬೆಂಬಲ ಒದಗಿಸಲು ಈ ದಸ್ತಾವೇಜು (ಕೈಪಿಡಿ) ಪ್ರಯತ್ನಿಸುತ್ತಿದೆ

Item Type: Book
Document Language:
Language
Kannada
Subjects: Social sciences > Education
Divisions: Azim Premji University
Full Text Status: Public
URI: http://publications.azimpremjiuniversity.edu.in/id/eprint/5665
Publisher URL:

Actions (login required)

View Item View Item