Behar, Anurag
(2023)
ಪಠ್ಯಕ್ರಮ ಚೌಕಟ್ಟು ಮತ್ತು ತಾತ್ವಿಕ ನೆಲೆಗಟ್ಟು.
Prajavani.
Abstract
ಕೇಂದ್ರ ಶಿಕ್ಷಣ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್), ಶಾಲಾ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಮಾತ್ರವಲ್ಲದೆ ಇಡೀ ಸಮಾಜದ ಹಿತಕ್ಕೆ ಎನ್‌ಸಿಎಫ್ ನಿರ್ಣಾಯಕ ಎನಿಸಿರುವುದರಿಂದ, ಇದು ಏನನ್ನು ಒಳಗೊಂಡಿದೆ ಎಂಬುದನ್ನು ಅರಿಯುವುದು ಹೆಚ್ಚು ಉಪಯುಕ್ತ.
ನಾನು, ಈ ಪಠ್ಯಕ್ರಮ ಚೌಕಟ್ಟನ್ನು ಅಭಿವೃದ್ಧಿ ಪಡಿಸಲು ಸಚಿವಾಲಯವು ರೂಪಿಸಿದ್ದ ತಂಡದ ಸದಸ್ಯ. ಪಠ್ಯಕ್ರಮವೆಂದರೆ, ಶೈಕ್ಷಣಿಕ ಉದ್ದೇಶವನ್ನು ಸಾಧಿಸುವ ಹಾದಿಯಲ್ಲಿ ಮಗು ಶಾಲೆಯಲ್ಲಿ ಪಡೆಯುವ ಸಂಪೂರ್ಣ ಅನುಭವ. ಕಲಿಕೆಯ ಗುರಿಗಳು, ಪಠ್ಯವಿಷಯ, ಶಿಕ್ಷಣ ಶಾಸ್ತ್ರೀಯ ಅಭ್ಯಾಸಗಳು, ಬೋಧನಾ- ಕಲಿಕಾ ಸಾಮಗ್ರಿಗಳು, ತರಗತಿಯ ಅಭ್ಯಾಸಗಳು, ಶಾಲಾ ಸಂಸ್ಕೃತಿಯಂತಹ ಅನೇಕ ಸಂಗತಿಗಳನ್ನು ಅದು ಒಳಗೊಂಡಿರುತ್ತದೆ. ಈ ಎಲ್ಲಾ ಅಂಶಗಳು ಮಗುವಿನ ಕಲಿಕೆಯನ್ನು ರೂಪಿಸುವುದರಿಂದ, ಪಠ್ಯಕ್ರಮವನ್ನು ಸಂಕುಚಿತ ವ್ಯಾಖ್ಯಾನದ ಬದಲಿಗೆ ವಿಶಾಲವಾದ ದೃಷ್ಟಿಕೋನದಿಂದ ಪರಿಭಾವಿಸುವುದು ಮುಖ್ಯ. ಪಠ್ಯಕ್ರಮವನ್ನು ವಸ್ತುವಿಷಯ, ಶಿಕ್ಷಣಶಾಸ್ತ್ರ ಮತ್ತು ಮೌಲ್ಯಮಾಪನದ ಪರಿಮಿತಿಗೆ ಒಳಪಡಿಸದೆ, ಅದರ ಬಗ್ಗೆ ವಿಸ್ತೃತವಾದ ಅರಿವು ಮೂಡಿಸಿಕೊಳ್ಳುವುದು ಹೆಚ್ಚು ನೈಜತೆಯಿಂದ ಕೂಡಿರುತ್ತದೆ
Actions (login required)
|
View Item |