A., Narayana
(2017)
ಭಾಷಣ ಮುಗಿದಿದೆ, ಪ್ರಶ್ನೆಗಳು ಉಳಿದಿವೆ.
Prajavani.
Abstract
ಭಾಷಣ ಮುಗಿದಿದೆ. ಯಾವುದೂ ಸ್ಪಷ್ಟವಾಗುತ್ತಿಲ್ಲ. ಯಾರಿಗೂ ಸ್ಪಷ್ಟತೆ ಇದ್ದಂತೆ ತೋರುವುದೂ ಇಲ್ಲ. ನೋಟು ರದ್ದತಿಗೆ ಐವತ್ತು ದಿನಗಳಾದ ಸಂದರ್ಭ ಪ್ರಧಾನ ಮಂತ್ರಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣ, ಇರುವ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನೋಟು ರದ್ದತಿ ಘೋಷಣೆ ಆದಂದಿನಿಂದಲೂ ಎಲ್ಲವೂ ಎರಡು ರೀತಿಯ ಅತಿರೇಕಗಳಲ್ಲಿ ಕಳೆದು ಹೋದವು. ಈಗಿನ ಪ್ರಧಾನ ಮಂತ್ರಿ ಏನೇ ಮಾಡಲಿ ಅದನ್ನು ವಿರೋಧಿಸಿಯೇ ಸಿದ್ಧ ಎನ್ನುವವರು ಒಂದೆಡೆ. ಇನ್ನೊಂದೆಡೆ ಈ ಪ್ರಧಾನಿ ಏನು ಮಾಡಿದರೂ ದೇಶದ ಒಳಿತಿಗಾಗಿಯೇ ಮಾಡುತ್ತಾರೆ ಮತ್ತು ಆ ಕಾರಣಕ್ಕೆ ಅವರು ಮಾಡಿದ್ದೆಲ್ಲವನ್ನೂ ತುಟಿ ಪಿಟಿಕ್ಕೆನ್ನದೆ ಒಪ್ಪಿಕೊಳ್ಳಬೇಕು ಎನ್ನುವವರು. ಮೊದಲೇ ನೋಟು ರದ್ದತಿ ಇತ್ಯಾದಿ ಅರ್ಥಶಾಸ್ತ್ರದ ವಿಷಯಗಳು ತೀರಾ ಕ್ಲಿಷ್ಟಕರ. ಅದರ ಜತೆಗೆ ಈ ರೀತಿಯ ರಾಜಕೀಯ ನೆಲೆಯ ವಿರೋಧ ಮತ್ತು ಭಾವನಾತ್ಮಕ ನೆಲೆಯ ಬೆಂಬಲ ಸೇರಿಬಿಟ್ಟರೆ ಮತ್ತೆ ಏನೂ ಹೇಳಬೇಕಿಲ್ಲ. ನಿಜಕ್ಕೂ ಆದದ್ದೇನು, ಆಗುತ್ತಿರುವುದೇನು ಎನ್ನುವುದು ಯಾರಿಗೂ ತಿಳಿಯಲು ಸಾಧ್ಯವಿಲ್ಲ. ಕಳೆದ ಐವತ್ತು ದಿನಗಳಲ್ಲಿ ಆದದ್ದು ಇದು. ಏನಾಗುತ್ತಿದೆ ಎಂದು ನೋಟು ರದ್ದತಿ ಮಾಡಿದ ಸರ್ಕಾರವೂ ಸೇರಿದಂತೆ ಯಾರಿಗೂ ತಿಳಿಯುತ್ತಿರಲಿಲ್ಲ. ಈಗಲಾದರೂ ತಿಳಿದಿದೆ ಎನ್ನುವ ಭರವಸೆ ಹುಟ್ಟುತ್ತಿಲ್ಲ.
Actions (login required)
|
View Item |