ಸಂಸದನ ವಿಕೃತಿಗೆ ದೇಶದ ಸಮ್ಮತಿ

A., Narayana (2017) ಸಂಸದನ ವಿಕೃತಿಗೆ ದೇಶದ ಸಮ್ಮತಿ. Prajavani.

[img] Text
Download (278kB)

Abstract

‘ನಿಮ್ಮಲ್ಲಿ ಕಣ್ಣೀರು ಎನ್ನುವುದು ಇದೆ ಎಂದಾದರೆ ಅದನ್ನು ಈಗ ಹರಿಸಿ’. ಇದು ಷೇಕ್ಸ್‌ಪಿಯರ್‌ನ ‘ಜೂಲಿಯಸ್ ಸೀಸರ್’ ನಾಟಕದ ಮಾರ್ಕ್ ಆಂಟನಿ ಎನ್ನುವ ಪಾತ್ರ ಸೀಸರನ ಹತ್ಯೆಯ ವಿರುದ್ಧ ಜನರನ್ನು ಎತ್ತಿಕಟ್ಟಲು ಆವೇಶಭರಿತವಾಗಿ ಹೇಳುವ ಮಾತು. ಇದೇ ಧಾಟಿಯಲ್ಲಿ ಹೇಳುವುದಾದರೆ ಭಾರತದ ನಾಗರಿಕರಿಗೆ ಸಾತ್ವಿಕ ಆಕ್ರೋಶ ಎನ್ನುವುದೇನಾದರೂ ಇದ್ದಿದ್ದರೆ ಅದು ಹೋದ ಗುರುವಾರ ಕಾಣಿಸಿಕೊಳ್ಳಬೇಕಿತ್ತು. ಅಥವಾ ಅಂತಹ ಆಕ್ರೋಶ ತೋರಿಸಿ ಎಂದು ಯಾರಾದರೂ ದೇಶದ ಜನರಿಗೆ ಕರೆ ನೀಡಬೇಕಿತ್ತು. ಎರಡೂ ನಡೆಯಲಿಲ್ಲ. ದೆಹಲಿಯಲ್ಲಿ ಶಿವಸೇನೆಯ ಸನ್ಮಾನ್ಯ ಸಂಸತ್ ಸದಸ್ಯರೊಬ್ಬರು ವಿಮಾನ ಕಂಪೆನಿಯ ಅಮಾಯಕ ನೌಕರರೋರ್ವರಿಗೆ ಚಪ್ಪಲಿಯಲ್ಲಿ ಮನಸೋ ಇಚ್ಛೆ ಥಳಿಸಿದ ವಿದ್ಯಮಾನವನ್ನು ದೇಶಕ್ಕೆ ದೇಶವೇ ಅಪ್ಪಟ ಮನರಂಜನೆಯನ್ನು ನೋಡುವಂತೆ ನೋಡಿತು. ‘ಬಡೇ ಬಡೇ ದೇಶೋ ಮೆ ಐಸಿ ಚೋಟಿ ಚೋಟಿ ಬಾತೇ ಹೋತಿ ರಹ್ತಿ ಹೈ’ (ದೊಡ್ಡ ದೊಡ್ಡ ದೇಶಗಳಲ್ಲಿ ಇಂತಹ ಸಣ್ಣ ಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ) ಎನ್ನುವ ಶಾರುಖ್ ಖಾನ್ ಸಿನಿಮಾವೊಂದರ ಡೈಲಾಗ್ ಅನ್ನು ಇಡೀ ದೇಶ ಒಪ್ಪಿಕೊಂಡು ಪಠಿಸುವಂತೆ ತೋರಿತು.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Shiva sena, Air India, Member of Parliment, Employee,
Subjects: Social sciences > Social problems & services
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4995
Publisher URL:

Actions (login required)

View Item View Item