ಯಾರಿಗೋ ಜ್ವರ, ಸೆಕ್ಯುಲರಿಸಂಗೆ ಬರೆ

A., Narayana (2018) ಯಾರಿಗೋ ಜ್ವರ, ಸೆಕ್ಯುಲರಿಸಂಗೆ ಬರೆ. Prajavani.

[img] Text
Download (436kB)

Abstract

ಪಾರ್ಲಿಮೆಂಟಿನಲ್ಲಿ ಅವರು ಕ್ಷಮಾಪಣೆ ಕೇಳಲೇಬೇಕು ಎಂದು ಪಟ್ಟು ಹಿಡಿಯುವ ಅಗತ್ಯವೇನೂ ಇರಲಿಲ್ಲ. ಅವಶ್ಯಕತೆ ಇದ್ದದ್ದು ಅವರ ಕ್ಷಮೆಯಾಚನೆ ಅಲ್ಲ. ಮಾನವೀಯತೆಯಲ್ಲಿ ಮತ್ತು ಪ್ರಜಾತಂತ್ರದಲ್ಲಿ ನಂಬಿಕೆ ಇರುವ ಜನ, ಅವರಿಂದ ಕೇಳಿ ಪಡೆದುಕೊಳ್ಳಬೇಕಾಗಿದ್ದದ್ದು ಸ್ಪಷ್ಟನೆಯನ್ನು, ವಿವರಣೆಯನ್ನು ಮತ್ತು ಸಮರ್ಥನೆಯನ್ನು. ಅವರು ಕ್ಷಮೆ ಕೇಳುವುದರೊಂದಿಗೆ ಎಲ್ಲವೂ ಮುಗಿದುಹೋಯಿತು ಎನ್ನುವುದರಿಂದ ಸಂವಿಧಾನ ಜಯಿಸಲಿಲ್ಲ. ವಿಷಯ ಇತ್ಯರ್ಥ ಆಗಲಿಲ್ಲ. ಕ್ಷಮೆಯಾಚನೆ ಹೃದಯದಿಂದ ಮೂಡಿಬರಬೇಕಾದ ಸಂವೇದನೆ. ರಾಜಕೀಯ ಒತ್ತಾಯಕ್ಕಾಗಿ ಯಾಚಿಸುವ ಕ್ಷಮೆ ಒಂದು ಸುಂದರವಾದ ಸುಳ್ಳು. ಪ್ರಜಾತಂತ್ರ ಎನ್ನುವುದು ಅರ್ಧ ಪ್ರಹಸನ, ಅರ್ಧ ಪ್ರಮಾಣ. ಭಾರತದಪ್ರಜಾತಂತ್ರದಲ್ಲಿ ಪ್ರಹಸನವೇ ಪ್ರಮಾಣವಾಗುತ್ತಿದೆಯೇನೋ ಎಂದು ಭಾಸವಾಗುವಂತೆ ಎಲ್ಲವೂ ಮುಗಿದುಹೋಯಿತು ನೋಡಿ.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Anantkumar Hegde, Member of the Lok Sabha,
Subjects: Religion > Philosophy & theory of religion > Concepts of God > Humanism and secularism
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4975
Publisher URL:

Actions (login required)

View Item View Item