ಚುನಾವಣಾ ಸುತ್ತಣ ಈ ಹೊತ್ತಿನ ಸತ್ಯಗಳು
A., Narayana (2018) ಚುನಾವಣಾ ಸುತ್ತಣ ಈ ಹೊತ್ತಿನ ಸತ್ಯಗಳು. Prajavani.
|
Text
Download (241kB) |
Abstract
ಚುನಾವಣಾ ಫಲಿತಾಂಶಗಳು ಸಾರುವ ಸತ್ಯಗಳಿಗಿಂತ ಪ್ರಖರವಾದ ಸತ್ಯಗಳನ್ನು ಪಕ್ಷಗಳು ಚುನಾವಣೆಗೆ ಸಜ್ಜುಗೊಳ್ಳುವ ರೀತಿಯಲ್ಲಿ ಕಾಣಿಸುತ್ತವೆ. ಒಂದು ಪ್ರಮುಖ ಘಟ್ಟಕ್ಕೆ ತಲುಪಿರುವ ಕರ್ನಾಟಕದ ಚುನಾವಣಾ ಕಣದಲ್ಲಿ ಯಾವ ಯಾವ ಪಕ್ಷಗಳಿಂದ ಯಾರ‍್ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಹೆಚ್ಚು ಕಡಿಮೆ ನಿರ್ಣಯವಾಗಿ ಹೋಗಿದೆ. ಕಾಲ ಬದಲಾಗಿದೆ, ತಂತ್ರಜ್ಞಾನ ಬದಲಾಗಿದೆ, ಮತದಾರರ ಒಲವು ನಿಲುವುಗಳು ಬದಲಾಗಿವೆ, ಚುನಾವಣಾ ಪ್ರಚಾರದ ವೈಖರಿ ಬದಲಾಗಿದೆ, ಕೆಲವು ಪಕ್ಷಗಳ ನಾಯಕತ್ವದ ಶೈಲಿಯಲ್ಲಿ ಕಂಡುಕೇಳರಿಯದ ಬದಲಾವಣೆಗಳಾಗಿವೆ. ಆದರೆ ಈ ಬಾರಿಯೂ ಮೂರೂ ಮುಖ್ಯ ಪಕ್ಷಗಳು ಅಳೆದು ಸುರಿದು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಪ್ರಕ್ರಿಯೆಯಲ್ಲಿ ಭಿನ್ನವಾದದ್ದು, ಹೊಸತನದ್ದು ಅಂತ ಏನೂ ಕಾಣಿಸಲಿಲ್ಲ. ಹಿಂದಿನ ಚುನಾವಣೆಗಳಲ್ಲಿ ಕಂಡ ಆಗುಹೋಗುಗಳೇ ಮತ್ತೊಮ್ಮೆ ನಮ್ಮ ಕಣ್ಣಮುಂದೆ ನಡೆದು ಹೋದವು. ಆದರೂ ಅಭ್ಯರ್ಥಿ ಆಯ್ಕೆಯ ಸುತ್ತಣ ಜರುಗಿದ ವಿದ್ಯಮಾನಗಳನ್ನೆಲ್ಲಾ ಸೂಕ್ಷ್ಮವಾಗಿ ಅರ್ಥೈಸಿಕೊಂಡರೆ ಗಮನಿಸಬೇಕಾದ ಕೆಲ ಪ್ರಮುಖ ವಿಚಾರಗಳಿವೆ. ಈ ಮೂರೂ ಪಕ್ಷಗಳಲ್ಲಿ ಅವುಗಳು ಏನೇನು ಎಂದು ಒಂದೊಂದಾಗಿ ನೋಡೋಣ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Election, Congress, BJP, |
| Subjects: | Social sciences > Political Science > The political process > Election systems and procedures |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4970 |
| Publisher URL: |
Actions (login required)
![]() |
View Item |


PlumX Metrics
PlumX Metrics