ಅಶೋಕ ಚಕ್ರ ಹಿಮ್ಮುಖ ಚಲಿಸುತ್ತಿದೆ ನೋಡಾ!

A., Narayana (2018) ಅಶೋಕ ಚಕ್ರ ಹಿಮ್ಮುಖ ಚಲಿಸುತ್ತಿದೆ ನೋಡಾ! Prajavani.

[img] Text
Download (368kB)

Abstract

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಚಾರಿತ್ರಿಕ ಕ್ಷಣಕ್ಕೆ ದೇಶದ ಜ್ಯೋತಿಷಿಗಳು ಮುಹೂರ್ತ ನಿರ್ಣಯಿಸಿದ ಕತೆ ಚರಿತ್ರೆಯ ಭಾಗ. ಆದರೆ ಅದು ಬಹಳ ಮಂದಿಗೆ ತಿಳಿದಿರಲಾರದು. ಭಾರತ ಸ್ವಾತಂತ್ರ್ಯ ಪಡೆಯುವ ದಿನಾಂಕ ಆಗಸ್ಟ್ 15 ಆಗಿರಬೇಕು ಎಂದು ನಿರ್ಧರಿಸಿದ್ದು ವೈಸರಾಯ್ ಮೌಂಟ್‌ಬ್ಯಾಟನ್. ಒಂದು ಪತ್ರಿಕಾಗೋಷ್ಠಿಯಲ್ಲಿ ಕುಳಿತು ಕ್ಷಣಾರ್ಧದಲ್ಲಿ ಅವರು ದಿನ ನಿಶ್ಚಯ ಮಾಡಿದ್ದರು. 1948ರ ಜೂನ್‌ ಒಳಗೆ ಭಾರತೀಯರಿಗೆ ಅಧಿಕಾರ ಹಸ್ತಾಂತರ ಮಾಡುವ ಬ್ರಿಟಿಷ್ ಸರ್ಕಾರದ ನಿರ್ಧಾರವನ್ನು ತಿಳಿಸುವುದಕ್ಕಾಗಿ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಪತ್ರಿಕಾಗೋಷ್ಠಿಗೆ ಬರುವಾಗ ಮೌಂಟ್‌ಬ್ಯಾಟನ್, ಅಧಿಕಾರ ಹಸ್ತಾಂತರದ ದಿನ ನಿರ್ಧರಿಸಿಕೊಂಡು ಬಂದಿರಲಿಲ್ಲ. ಇನ್ನೇನು ಪತ್ರಿಕಾಗೋಷ್ಠಿ ಮುಗಿಯಿತು ಎನ್ನುವ ವೇಳೆಗೆ ಪ್ರಶ್ನೆಯೊಂದು ತೂರಿಬಂತು. ‘ಅಧಿಕಾರ ಹಸ್ತಾಂತರ ನಿರ್ಣಯವಾಗಿದೆ ಎಂದಮೇಲೆ ಯಾವ ದಿನಾಂಕದಂದು ನಡೆಯಬೇಕು ಎಂದೂ ನಿರ್ಧರಿಸಿರಬೇಕಲ್ಲ? ಅದು ಯಾವತ್ತು ಅಂತ ತಿಳಿಸಬಹುದೇ?’

Item Type: Newspaper Article
Authors: A., Narayana
Document Language:
Language
Kannada
Uncontrolled Keywords: National Flag, Indian Flag, Flag, Ashoka Chakra,
Subjects: History & geography > Biography & genealogy > Genealogy, names, insignia > Forms of insignia and identification > Flags and banners
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4962
Publisher URL:

Actions (login required)

View Item View Item