ಇದು ನಂಬಿಕೆಯ ವಿಚಾರ, ಆದುದರಿಂದ...
A., Narayana (2018) ಇದು ನಂಬಿಕೆಯ ವಿಚಾರ, ಆದುದರಿಂದ... Prajavani.
|
Text
Download (343kB) |
Abstract
ಶಬರಿಮಲೆಗೆ ನಿರ್ದಿಷ್ಟ ವಯಸ್ಸಿನ ಸ್ತ್ರೀಯರು ಹೋಗಬಾರದು ಎನ್ನುವ ನಿರ್ಬಂಧ ಖಂಡಿತವಾಗಿಯೂ ನಂಬಿಕೆಯ ವಿಚಾರ. ಅಯ್ಯಪ್ಪ ಎಂಬ ದೇವರು ಅಥವಾ ದೇವರು ಎಂಬುದಾಗಿ ಕರೆಯಲ್ಪಡುವ ಅಯ್ಯಪ್ಪ ನೈಷ್ಠಿಕ ಬ್ರಹ್ಮಚಾರಿಯಾದ ಕಾರಣ ಆತನಿಗೆ ವಯಸ್ಸಿಗೆ ಬಂದ ಮತ್ತು ವಯಸ್ಸು ಮೀರದ ಸ್ತ್ರೀಯರ ಸೋಂಕು ತಗುಲಬಾರದು ಎನ್ನುವ ಕಾರಣಕ್ಕೆ ಈ ನಿಷೇಧ ಎನ್ನುವ ತರ್ಕವೂ ನಂಬಿಕೆಯ ವಿಚಾರ. ನಂಬಿಕೆ ಅಂದಮೇಲೆ ನಂಬಿಕೆ. ಅದರಲ್ಲಿ ಸರಿ-ತಪ್ಪುಗಳ ಪ್ರಶ್ನೆ ಇಲ್ಲ, ತಾರ್ಕಿಕ-ಅತಾರ್ಕಿಕದಪ್ರಶ್ನೆ ಇಲ್ಲವೇ ಇಲ್ಲ. ನಂಬಿಕೆಯ ಹೆಸರಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಅಥವಾ ಇನ್ಯಾವುದೇ ಅಪರಾಧ ಕೃತ್ಯಗಳು ನಡೆಯುವುದಿಲ್ಲ ಎಂದಾದರೆ ಅವರವರ ನಂಬಿಕೆ ಅವರವರಿಗೆ. ಇಷ್ಟನ್ನು ಒಪ್ಪಿಕೊಂಡ ಮೇಲೂ ನಂಬಿಕೆಗಳು ಮತ್ತು ಸಂವಿಧಾನದತ್ತವಾದ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಇತ್ಯಾದಿ ಮೌಲ್ಯಗಳು ಮುಖಾಮುಖಿಯಾದಾಗ ಕೂದಲು ಸೀಳುವ ವಿವಿಧ ರೀತಿಯ ವಾದಗಳನ್ನು ಮಂಡಿಸಬಹುದು. ಅದುಶಬರಿಮಲೆಯ ವಿಚಾರದಲ್ಲೂ ನಡೆಯುತ್ತಿದೆ. ಮನುಷ್ಯನನ್ನು ಸೃಷ್ಟಿಸಿರಬಹುದಾದ ದೇವರು ಮತ್ತು ಮನುಷ್ಯ ಸೃಷ್ಟಿಸಿದ ದೇವರುಗಳ ನಡುವಣ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಮಂದಿಯ ಸಂಖ್ಯೆ ಒಂದು ಸಮಾಜದಲ್ಲಿ ಕಡಿಮೆ ಇದ್ದಷ್ಟೂ ಆ ಸಮಾಜದಲ್ಲಿ ಇಂತಹ ಸಂಘರ್ಷಗಳು ಹೆಚ್ಚು ಹೆಚ್ಚು ನಡೆಯುತ್ತಿರುತ್ತವೆ.
| Item Type: | Newspaper Article |
|---|---|
| Authors: | A., Narayana |
| Document Language: | Language Kannada |
| Uncontrolled Keywords: | Sabarimala, Sabarimala Temple, Anuranana, |
| Subjects: | Social sciences > Social problems & services > Other social problems and services |
| Divisions: | Azim Premji University - Bengaluru > School of Public Policy and Governance |
| Full Text Status: | Public |
| Related URLs: | |
| URI: | http://publications.azimpremjiuniversity.edu.in/id/eprint/4957 |
| Publisher URL: |
Actions (login required)
![]() |
View Item |


PlumX Metrics
PlumX Metrics