ಹಳೆಯ ಕರ್ನಾಟಕವನ್ನೇ ಉಳಿಯಗೊಡಿ, ಸಾಕು

A., Narayana (2022) ಹಳೆಯ ಕರ್ನಾಟಕವನ್ನೇ ಉಳಿಯಗೊಡಿ, ಸಾಕು. Prajavani.

[img] Text
Download (454kB)

Abstract

‘ನವಭಾರತಕ್ಕಾಗಿ ನವಕರ್ನಾಟಕ’ ಎನ್ನುವುದು ರಾಜ್ಯ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಮಾಡಿರುವ ಘೋಷಣೆ. ಯಾವ ರೀತಿಯ ‘ನವಭಾರತ’ಕ್ಕಾಗಿ ಯಾವ ರೀತಿಯ ‘ನವಕರ್ನಾಟಕ’ ಸಿದ್ಧವಾಗುತ್ತಿದೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ‘ನವ’ ಎಂದರೆ ಹೊಸತು. ಕರ್ನಾಟಕದಲ್ಲಿ ಇತ್ತೀಚೆಗೆ ಹೊಸತು ಏನಾದರೂ ಕಾಣಿಸಿಕೊಂಡಿದ್ದರೆ ಅದರ ಹೆಸರು ದ್ವೇಷ ಅಂತ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅದರ ಹೆಸರು ಮುಸ್ಲಿಂ ದ್ವೇಷ ಅಂತ. ಶತಶತಮಾನಗಳಿಂದ ಈ ನೆಲದಲ್ಲಿ ಬೀಡುಬಿಟ್ಟಿದ್ದ ಸಾಮಾಜಿಕ ಸೌಹಾರ್ದ ಶಿಥಿಲವಾಗುತ್ತಿರುವುದು ಹೊಸ ಬೆಳವಣಿಗೆ. ಬಸವಾದಿ ಶರಣರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕಟ್ಟಿದ್ದ ‘ಅನ್ಯರಿಗೆ ಅಸಹ್ಯ ಪಡಬೇಡ’ ಎನ್ನುವ ಪ್ರಬುದ್ಧ ಪರಂಪರೆಯನ್ನು ಶತಾಯಗತಾಯ ಅಂತ್ಯಗೊಳಿಸುವ ಯಜ್ಞಕ್ಕೆ ರಾಜ್ಯ ಸರ್ಕಾರವೇ ಪೌರೋಹಿತ್ಯ ವಹಿಸಿರುವುದಂತೂ ಕರ್ನಾಟಕದ ಮಟ್ಟಿಗೆ ಹೊಚ್ಚ ಹೊಸದು. ನವಕರ್ನಾಟಕ ಎಂದರೆ ಇದುವೇ ಇರಬಹುದು.

Item Type: Newspaper Article
Authors: A., Narayana
Document Language:
Language
Kannada
Uncontrolled Keywords: Basavaraj Bommai, Karnataka, Communal Harmony, Hate Politics,
Subjects: Social sciences > Political Science
Divisions: Azim Premji University > School of Public Policy and Governance
Full Text Status: Public
Related URLs:
URI: http://publications.azimpremjiuniversity.edu.in/id/eprint/4917
Publisher URL:

Actions (login required)

View Item View Item