ಸಹಾ, ತಪಸ್ಯಾ
(2016)
ಅಜೀಂ ಪ್ರೇಂಜಿ ಶಾಲೆಗಳಲ್ಲಿ ಕಲಿಕಾ ವಾತಾವರಣದ ನಿರ್ಮಾಣ.
Learning Curve (3).
pp. 89-92.
ISSN 2582-1644
Abstract
ಕಲಿಕೆ ಎನ್ನುವುದು ನಿರಂತರ ಪಯಣ. ಈ ವಿಚಾರ
ಕನ್ಫೂಸಿಯಸ್ (ಕ್ರಿಸ್ತ ಪೂರ್ವ 551-479) ನಷ್ಟು
ಹಳೆಯದಾದದ್ದು. ಕನ್ಫೂಸಿಯಸ್ ಹೇಳುತ್ತಿದ್ದ ಮಾತಿನಂತೆ,
ಕಲಿತವನಿಗೇ ಜೀವನದಲ್ಲಿ ಯಶಸ್ಸು ಸಾಧ್ಯ, ಆದ್ದರಿಂದ
ಕಲಿಕೆಯನ್ನು ಬಾಲ್ಯದಲ್ಲಿಯೇ ಮೈಗೂಡಿಸಬೇಕು. ಬೌದ್ಧ
ಧರ್ಮದ ‘ವಿನಯ' ಹಾಗು ಇಸ್ಲಾಂ ಧರ್ಮದ ಮದರಸಾ,
ಇವೆರೆಡೂ ಧರ್ಮ ಹಾಗೂ ತತ್ವಗಳ ಬಗ್ಗೆ ಚರ್ಚೆ ನಡೆಸುವ
ತಾಣಗಳ ಹೆಸರು. ಪ್ಲೇಟೋನ ‘ಅಕಾಡೆಮಿ'ಯು ಪ್ರಾಯಶಃ
ಮೊದಲ ಶಾಲೆ ಅಥವಾ ಅವನ ಬಹು ಪ್ರಖ್ಯಾತ ವಿದ್ಯಾರ್ಥಿ
ಅರಿಸ್ಟಾಟಲ್‍ನ ‘ಲೀಸಿಯಂ'ನಲ್ಲಿ ಸಿರಿವಂತರು ತತ್ವಶಾಸ್ತ್ರ,
ರಾಜಕೀಯದ ಬಗ್ಗೆ ಚರ್ಚೆ ನಡೆಸಿ ಒಬ್ಬರ ಅಭಿಪ್ರಾಯಗಳಿಂದ
ಇನ್ನೊಬ್ಬರು ಕಲಿಯುತ್ತಿದ್ದರು. ಕಾಲ ಸರಿದಂತೆಲ್ಲ, ಸಮಾಜಕ್ಕೆ
ವಿವಿಧ ವರ್ಗಗಳ ಕೆಲಸಗಾರರು ಬೇಕಾಗುವಂತಾಯಿತು.
Actions (login required)
|
View Item |